ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ. 53 ಸೆಕೆಂಡುಗಳ ಈ ದೃಶ್ಯ ಮುದ್ದು ಮಕ್ಕಳು ಅಂಗನವಾಡಿಯಲ್ಲಿ ಕುಳಿತಿರುವ ದೃಶ್ಯದ ಮೂಲಕ ಶುರುವಾಗುತ್ತದೆ. ಈ ಮುದ್ದು ಮಕ್ಕಳ ನಡುವೆ ಕುಳಿತ ಪುಟಾಣಿಗೆ ನಿದ್ದೆ ಆವರಿಸಿತ್ತು. ಹೀಗಾಗಿ, ಈ ಕಂದ ಕುಳಿತಲ್ಲೇ ತೂಕಡಿಸುವುದಕ್ಕೆ ಆರಂಭಿಸಿದ್ದಳು. ಇದನ್ನು ಇತರ ಸಹಪಾಠಿಗಳೂ ನೋಡುತ್ತಿದ್ದರು. ಹೀಗೆ ಒಂದಷ್ಟು ಹೊತ್ತು ತೂಕಡಿಸಿದ್ದ ಈ ಮುಗ್ಧ ಬಾಲಕಿ ಕೊನೆಗೆ