ಗಣೇಶೋತ್ಸವದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಮಲ್ಲಿಕಾರ್ಜುನ್ ಎಂಬ ಯುವಕನ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನನ್ನ ಮಗನನ್ನು ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಹತ್ಯೆಗೈಯ್ಯಲಾಗಿದೆ ಎಂದು ಮೃತನ ತಾಯಿ ಭೀಮಾಬಾಯಿ ಅವರು ಇಂದು ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗನನ್ನು ಆತನ ಕಾಲೇಜಿನ ಸಂಗಡಿಗರೇ ದೂರವಾಣಿ ಕರೆ ಮಾಡಿ ಗಣೇಶನನ್ನು ನೀರಿಗೆ ಬಿಡುವ ವಿಚಾರ ಪ್ರಸ್ತಾಪಿಸಿ ಕರೆಸಿಕೊಂಡು ಬಳಿಕ ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ