ಮೊಲ ಮತ್ತು ಹುಲಿ ಮರಿಯ ಆಟದ ವಿಡಿಯೋವೊಂದು ಈಗ ಎಲ್ಲರ ಗಮನ ಸೆಳೆದಿದೆ. ಇದು ಹುಲಿ ಮರಿ ಮತ್ತು ಮೊಲ ಆಟ ಆಡುವ ದೃಶ್ಯ. ಈ ಆಟ ಎಷ್ಟು ಖುಷಿ ಮೂಡಿಸುತ್ತದೋ ಅಷ್ಟೇ ಅಚ್ಚರಿಗೂ ಕಾರಣವಾಗಿದೆ. ಮೊಲದ ಆಕ್ರಮಣಕಾರಿ ನಡೆ ಈ ದೃಶ್ಯವನ್ನು ಎಲ್ಲರೂ ತದೇಕಚಿತ್ತದಿಂದ ನೋಡುವಂತೆ ಮಾಡಿದೆ. ಹೀಗೆ ಆಟದ ಮೂಡ್ನಲ್ಲಿ ಮೊಲ ಹುಲಿ ಮರಿಯ ಮೇಲೆ ಎರಗುತ್ತದೆ. ಈ ಅನಿರೀಕ್ಷಿತ ದಾಳಿಯಿಂದ ಪುಟಾಣಿ ಹುಲಿ ಹೆದರಿ ಹೋಗುತ್ತದೆ.