ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪ್ರಣಾಳಿಕೆ ಸಮಿತಿಯ ಮಹತ್ವದ ಸಭೆ ನಡೆದಿದೆ. ಸಮಿತಿ ಸದಸ್ಯರಾದ ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್, ಮುಖಂಡರಾದ ಪುಷ್ಪಾ ಅಮರನಾಥ್, ಜಿ.ಕೃಷ್ಣಪ್ಪ ಇತರರು ಪ್ರಣಾಳಿಕೆ ಸಿದ್ದತೆಯ ಕುರಿತು ಚರ್ಚೆ ನಡೆಸಿದರು. ಕೈಗಾರಿಕೆ, ಕೃಷಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ವಿಷಯಗಳ ಪ್ರತ್ಯೇಕ ಸಭೆಗಳನ್ನು ನಡೆಸಿ ಪ್ರಣಾಳಿಕೆಯಲ್ಲಿ ಅಳವಡಿಸುವ ಬಗ್ಗೆ ಚರ್ಚಿಸಲಾಗಿದೆ. ಮೊಯ್ಲಿ ಅವರು ಆರು ಪ್ರದೇಶವಾರುಗಳ ಸಭೆ ನಡೆಸಿ ಪ್ರಣಾಳಿಕೆ ರೂಪಿಸಲಿದ್ದಾರೆ.