Widgets Magazine

ಕುಡಿದ ನಶೆಯಲ್ಲಿ ಮಗನ ಕತ್ತು ಹಿಸುಕಿ ಪಾಪಿ ತಂದೆ ಮಾಡಿದ್ದೇನು?

ಹೈದರಾಬಾದ್| Jagadeesh| Last Modified ಶನಿವಾರ, 12 ಅಕ್ಟೋಬರ್ 2019 (14:48 IST)

ಕುಡಿತದ ನಶೆಯಲ್ಲಿದ್ದ ತಂದೆಯೊಬ್ಬ ಮಗನೊಂದಿಗೆ ಜಗಳ ತೆಗೆದು ಆತನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ರಾಜಕೀಯದಲ್ಲಿ ಗುರುತಿಸಿಕೊಂಡಿರೋ ನಾರಾಯಣ ರೆಡ್ಡಿ ಹೆತ್ತ ಮಗನನ್ನೇ ಕೊಲೆ ಮಾಡಿರೋ ಆರೋಪಿಯಾಗಿದ್ದಾನೆ.

ಎಂಜಿನಿಯರಿಂಗ್ ಓದುತ್ತಿದ್ದ ಶ್ರವಣ ರೆಡ್ಡಿ ಕೊಲೆಯಾದ ಮಗನಾಗಿದ್ದಾನೆ.

ಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದ ಪಾಪಿ ಆತನ ದೇಹವನ್ನು ಕೋಳಿ ಫಾರಂನಲ್ಲಿ ಹೂತಿಟ್ಟಿದ್ದನು. ವಿಷಯ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ರು.

ತನಿಖೆ ನಡೆಸಿರೋ ಪೊಲೀಸರು ಕೊಲೆ ಆರೋಪಿ ನಾರಾಯಣ ರೆಡ್ಡಿಯನ್ನ ಬಂಧನ ಮಾಡಿದ್ದಾರೆ. ಹೈದರಾಬಾದ್ ನ ಇಬ್ರಾಹಿಂಪೂರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

 

 ಇದರಲ್ಲಿ ಇನ್ನಷ್ಟು ಓದಿ :