Widgets Magazine

ಗರ್ಭಿಣಿಯನ್ನು ಕೊಂದು ಗಿರಣಿಯಲ್ಲಿ ರುಬ್ಬಿ, ಸುಟ್ಟು ಬೂದಿ ಮಾಡಿದ ಪಾಪಿ ಪತಿ

ಲಕ್ನೋ| Jagadeesh| Last Modified ಗುರುವಾರ, 16 ಜನವರಿ 2020 (16:13 IST)

ಪಾಪಿ ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಹೀನಾಯವಾಗಿ ಕೊಂದು ವಿಕೃತಿ ಮೆರೆದಿದ್ದಾನೆ.

 

ತನಗೆ ಗಂಡು ಮಗು ಹುಟ್ಟಲಿಲ್ಲ ಅಂತ ಎರಡು ಹೆಣ್ಣು ಮಕ್ಕಳ ತಂದೆಯಾಗಿರೋ ಪಾಪಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ.

ಪತ್ನಿಯ ಮೃತದೇಹವನ್ನು ಗಿರಣಿಯಲ್ಲಿ ಹಾಕಿ ರುಬ್ಬಿ ಆ ಬಳಿಕ ಬೆಂಕಿ ಇಟ್ಟು ಅವಶೇಷಗಳನ್ನು ಸುಟ್ಟಿದ್ದಾನೆ.

ಉತ್ತರಪ್ರದೇಶದಲ್ಲಿ ಘಟನೆ ನಡೆದಿದ್ದು, 28 ವರ್ಷದ ಪತ್ನಿ ಊರ್ಮಿಳಾನನ್ನು ಕೊಂದಿರೋ ಪತಿ ರವೀಂದ್ರ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೊಲೆಗೆ ಸಹಕರಿಸಿದ ಆರೋಪದ ಮೇಲೆ ಆರೋಪಿಯ ಅಪ್ಪ ಹಾಗೂ ಸಂಬಂಧಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

 

 





ಇದರಲ್ಲಿ ಇನ್ನಷ್ಟು ಓದಿ :