ಪತ್ನಿ ಶವದ ಜೊತೆ ಮೂರು ದಿನ ಕಳೆದ ಪಾಪಿ ಪತಿ

ಕಲಬುರಗಿ| Jagadeesh| Last Modified ಮಂಗಳವಾರ, 5 ನವೆಂಬರ್ 2019 (18:44 IST)

ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಅವಳ ದೇಹವನ್ನು ಮನೆಯಲ್ಲಿಟ್ಟುಕೊಂಡು ಮೂರು ದಿನ ಕಳೆದಿದ್ದ ಘಟನೆ ನಡೆದಿದೆ.  

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾದಲ್ಲಿ ಘಟನೆ ನಡೆದಿದ್ದು, ಸಂಗೀತಾ ಕೊಲೆಯಾದ ಪತ್ನಿಯಾಗಿದ್ದರೆ ಶ್ರೀಶೈಲ ಸಕ್ಕರಗಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶ್ರೀಶೈಲ್ ಮನೆಯಲ್ಲಿ ಪತ್ನಿ ಜೊತೆಗೆ ಜಗಳ ತೆಗೆಯುತ್ತಿದ್ದ. ಜಗಳ ವಿಪರೀತವಾದಾಗ ಪತ್ನಿಯನ್ನು ಕೊಲೆ ಮಾಡಿ ಶವವನ್ನು ಚೀಲದಲ್ಲಿ ತುಂಬಿ ಮಂಚದ ಕೆಳಗೆ ಮೂರು ದಿನ ಇಟ್ಟಿದ್ದಾನೆ.> >

ಕೊಳೆತು ನಾರುತ್ತಿದ್ದಾಗ ಅಕ್ಕ ಪಕ್ಕದವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ಪಾಪಿ ಪತಿಯ ದುಷ್ಕೃತ್ಯ ಬಯಲಿಗೆ ಬಂದಿದೆ.

 

 ಇದರಲ್ಲಿ ಇನ್ನಷ್ಟು ಓದಿ :