ಬಿ ಎಸ್ ಎಫ್ ಯೋಧನೊಬ್ಬ ತಮ್ಮ ಊರಿಗೆ ಬಂದರೂ ಮನೆಗೆ ಬಾರದೇ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಇದ್ದಾರೆ. ಸ್ವಂತ ಕ್ವಾರಂಟೈನ್ ಆಗಲು ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಯೋಧರೊಬ್ಬರು ನೆಲೆಸಿರುವ ಘಟನೆ ಚಿತ್ರದುರ್ಗದಲ್ಲಿ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಉತ್ತರ ಪ್ರದೇಶದ ಝಾನಸ್ಸಿಯಲ್ಲಿ ಬಿಎಸ್ಎಫ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗೇಶ್ ರಜೆ ಮೇಲೆ ಜುಲೈ 5 ರಂದು ಆಗಮಿಸಿದ್ದಾರೆ. ಬೆಂಗಳೂರು ಮೂಲಕ ಆಗಮಿಸಿದ ಯೋಗೇಶ್ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾವುದೇ ರೋಗ