ಚಿಕ್ಕಪ್ಪನೊಂದಿಗೆ ಸೇರಿದ ಪಾಪಿ ಮಗನೊಬ್ಬ ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಲೆ ಮಾಡಿಸಿದ್ದಾನೆ. ಬೆಂಗಳೂರಿನ ತಲಘಟ್ಟಪುರ ಪೊಲೀಸರು ಕೊಲೆ ಕೇಸ್ ಬೇಧಿಸುವಲ್ಲಿ ಸಫಲರಾಗಿದ್ದು, ಕೊಲೆ ಮಾಡಿದ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಬಳ್ಳಾರಿಯ ಸ್ಟೀಲ್ ಅಂಡ್ ಅಲೈ ಕಂಪೆನಿಯ ಡೈರೆಕ್ಟರ್ ಸಿಂಗನಮನ ಮಾಧವ ಅವರ ಸುಪಾರಿ ಕೊಲೆ ನಾಲ್ಕೈದು ತಿಂಗಳ ಹಿಂದೆ ನಡೆದಿತ್ತು.ಆರೋಪಿಗಳಾದ ಮಾಧವ ಅವರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಕಿರಿಯ ಪುತ್ರ ಹರಿಕೃಷ್ಣ ತಲೆ ಮರೆಸಿಕೊಂಡಿದ್ದಾರೆ. ಸುಪಾರಿ ಪಡೆದು ಕೊಲೆ ಮಾಡಿದ