ಕಾಶ್ಮೀರದಲ್ಲಿ ರಾಜ್ಯದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಾಲೂಕಿನ ಕರಡಿಕೊಪ್ಪ ಗ್ರಾಮದ ಯೋಧ ಮಂಜುನಾಥ ಓಲೆಕಾರ (29) ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವೇಳೆ ಗುಂಡೇಟು ತಗುಲಿ ತೀವ್ರ ಗಾಯವಾಗಿತ್ತು. ಕೂಡಲೇ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಯೋಧ ಮಂಜುನಾಥ ಓಲೆಕಾರ ಮೃತಪಟ್ಟಿರುವ ಕುರಿತು ಹುಬ್ಬಳ್ಳಿಯ ಕರಡಿಕೊಪ್ಪದ ಇನಾಂವೀರಾಪುರದಲ್ಲಿಯ ಯೋಧನ ಮನೆಗೆ ಸೇನಾಧಿಕಾರಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದೆ.ಸುಮಾರು 10 ವರ್ಷದಿಂದ ಸೇನೆಯಲ್ಲಿರುವ