Widgets Magazine

ಮೊಬೈಲ್ ಕಳೆದುಕೊಂಡಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿನಿ

ಮೈಸೂರು| Jagadeesh| Last Modified ಗುರುವಾರ, 15 ನವೆಂಬರ್ 2018 (14:00 IST)
ಮೊಬೈಲ್ ಕಳೆದುಕೊಂಡ ವಿಷಯಕ್ಕೆ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

16ವರ್ಷದ ವಿದ್ಯಾರ್ಥಿನಿ ನಿಖಿತಾ ಮೃತ ದುರ್ದೈವಿಯಾಗಿದ್ದಾಳೆ. ಮೈಸೂರಿನ ಗಾಂಧಿನಗರದಲ್ಲಿ ಘಟನೆ ನಡೆದಿದ್ದು, 10 ನೇ ತರಗತಿ ವಿದ್ಯಾರ್ಥಿನಿ ನಿಖಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಗಾಯಿತ್ರಿಪುರಂ ನಲ್ಲಿರುವ ಗಣಪತಿಸಚ್ಚಿದಾನಂದ ಶಾಲೆಯ ವಿದ್ಯಾರ್ಥಿನಿಯಾಗಿದ್ದ ನಿಖಿತಾ, ಆತ್ಮಹತ್ಯೆ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರ್ಸಿಸ್ ವಿಲಿಯಮ್ ಹಾಗೂ ಮೇರಿ ಪದ್ಮಿನಿ ದಂಪತಿ ಪುತ್ರಿಯಾಗಿರುವ ನಿಖಿತಾ, ಸಹೋದರ ಬಬ್ಲು ಜೊತೆ ನಿನ್ನೆ ಸಂಜೆ ಮಾತನಾಡಿದ್ದಳು. ಆ ಬಳಿಕ ಮೊಬೈಲ್ ಕಳೆದಿದೆ. ಅಪ್ಪ ಕೊಟ್ಟ ನೆನಪಿನ ಮೊಬೈಲ್ ಕಳೆದುಕೊಂಡು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಇದರಲ್ಲಿ ಇನ್ನಷ್ಟು ಓದಿ :