ಹಾಸನ : ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ ಜೋಗಿಕೊಪ್ಪಲು ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾವಣನಿಗೆ ಸಕಲ ಐಶ್ವರ್ಯ, ಈಶ್ವರನಿಂದ ಪಡೆದ ಶಕ್ತಿಶಾಲಿ ಅಸ್ತ್ರ ಇದ್ದು ಸಹ ನಾಶವಾದ.ಲಂಕೆ ಕೂಡ ಬೂದಿ ಆಯಿತು. ಯಾವುದಕ್ಕೆ ಆರಂಭ ಇರುತ್ತದೆಯೋ ಅದಕ್ಕೆ ಅಂತ್ಯ ಕೂಡ ಇರುತ್ತದೆ ಎಂದು ರೇವಣ್ಣ