ಟ್ಯೂಷನ್ ಹಾಗೂ ಶಾಲೆಯಲ್ಲಿ 12ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಶಿಕ್ಷಕನೊಬ್ಬ ನಿರಂತರವಾಗಿ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಶಾಲೆ ಹಾಗೂ ಟ್ಯೂಷನ್ ಗೆ ಅಂತ ಬರುತ್ತಿದ್ದ 10 ವರ್ಷದೊಳಗಿನ ವಿದ್ಯಾರ್ಥಿನಿಯರ ಮೇಲೆ ಮುಗಿಬಿದ್ದು ಶಿಕ್ಷಕ ತನ್ನ ಕಾಮದಾಹ ತೀರಿಸಿಕೊಳ್ಳುತ್ತಿದ್ದನು. ಎರಡು ವರ್ಷಗಳಲ್ಲಿ ಸುಮಾರು 12 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಶಿಕ್ಷಕ ತಪ್ಪೊಪ್ಪಿಕೊಂಡಿದ್ದಾನೆ. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಕೃತ್ಯ ಬಯಲಿಗೆ ಬಂದಿದ್ದು,