ಅದು ಕಳೆದ ಭಾನುವಾರದ ರಾತ್ರಿ ಹತ್ತು ಗಂಟೆ ಸಮಯ.. ಕನ್ನಡ ಬಾವುಟ ಕೈಯಲ್ಲಿ ಹಿಡಿದ ವ್ಯಕ್ತಿಯೊಬ್ಬ ಸಾರ್ವಜನಿಕರ ಮುಂದೆಯೇ ಬಾವುಟಕ್ಕೆ ಬೆಂಕಿ ಹಚ್ಚೋಕೆ ಶುರುಮಾಡಿದ್ದ.. ತಕ್ಷಣ ಅಲರ್ಟ್ ಆದ ಜನರು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ರು.ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಪರಂಗಿ ಪಾಳ್ಯ.. ಹೀಗೆ ಪೊಲೀಸರ ಮುಂದೆ ಸೈಲೆಂಟ್ ಆಗಿ ನಿಂತಿರುವ ಈ ವ್ಯಕ್ತಿಯೇ ನೋಡಿ ಕನ್ನಡ ಬಾವುಟಕ್ಕೆ ಬೆಂಕಿ ಹಾಕಲು ಯತ್ನಿಸಿ ಸಿಕ್ಕಿಬಿದ್ದಿರುವ ಕನ್ನಡ ದ್ರೋಹಿ..