ದೇವರಿಗೆ ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ದೇವರಿಗೆ ಮದ್ಯ, ಸಿಗರೇಟ್ ಅರ್ಪಿಸುವುದನ್ನು ನೋಡಿರುತ್ತೀರಾ? ಹೌದು ಇದು ಸತ್ಯ. ಇಂತಹ ವಿಶಿಷ್ಟ ಜಾತ್ರೆಯೊಂದು ಉತ್ತರ ಕನ್ನಡದ ಕಾರವಾರದ ಕೋಡಿಬಾಗ್ನಲ್ಲಿ ನಡೆಯುತ್ತದೆ. ಅಲ್ಲಿನ ಆರಾಧ್ಯ ದೈವ ಖಾಪ್ರಿಗೆ ಸಿಗರೇಟ್ ಆರತಿ ಬೆಳಗಿ, ಮದ್ಯದಭಿಷೇಕ ಮಾಡಿ ಕೋಳಿ ಮಾಂಸವನ್ನು ಅರ್ಪಿಸುತ್ತಾರೆ. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆ ಈ ಬಾರಿ ಮಾರ್ಚ್ 5 ರಂದು ವೈಭವೋಪೇತವಾಗಿ ನಡೆಯಿತು.