ಬೆಂಗಳೂರು : ಕಾಮುಕನೊಬ್ಬ ತಡರಾತ್ರಿ ಮಹಿಳೆಯೊಬ್ಬಳಿಗೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶನ ಮಾಡಿ ವಿಕೃತಿ ಮರೆದಿದ್ದಾನೆ. ಖಾಸಗಿ ಕಂಪನಿಯ ಮಹಿಳಾ ಮ್ಯಾನೇಜರ್ ಒಬ್ಬರು ಜ.12ರಂದು ನಸುಕಿನ ಜಾವ ಸುಮಾರು 2:47ಕ್ಕೆ ನಿದ್ರಿಸುತ್ತಿದ್ದ ವೇಳೆ ಅಪರಿಚಿತನೊಬ್ಬ ವಿಡಿಯೋ ಕಾಲ್ ಮಾಡಿ ಆಕೆಯ ಮುಂದೆ ಬೆತ್ತಲಾಗಿ ನಿಂತಿದ್ದಾನೆ. ಆಗ ಆಕೆ ಕಾಲ್ ಕಟ್ ಮಾಡಿದ್ದಾಳೆ. ನಂತರ ಕಾಮುಕ ಮತ್ತೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶನ ಮಾಡಿ ಮಹಿಳೆಗೆ ಅಸಭ್ಯವಾಗಿ ನಿಂದಿಸಿದ್ದಾನೆ.