ಅಯ್ಯೋ ಬಿಸಿಲು, ತುಂಬಾ ಸೆಕೆ, ಹೇಗಪ್ಪಾ ಹೊರಗಡೆ ಒಡಾಡೋದು ಅಂತ ರಾಜ್ಯದ ಜನತೆ ಮಂಡೆ ಬಿಸಿ ಮಾಡ್ಕೊಂಡಿದ್ರು. ಈ ಬೆನ್ನಲ್ಲೇ ನಾನಿದೀನಿ ಅಂತ ಕಳೆದ ಎರಡು ದಿನಗಳ ಹಿಂದೆ ಎಂಟ್ರಿಕೊಟ್ಟಿದ್ದ ಮಳೆರಾಯ ರಾಜ್ಯಕ್ಕೆ ತಂಪೆರೆದಿದ್ದ. ಬಿಸಿಲಿನ ಬೇಗೆಗೆ ಬೆಂದಿದ್ದ ಭೂಮಿಗೆ ತಣ್ಣನೆಯ ಸ್ಪರ್ಶ ನೀಡಿದ್ದ. ಬೆವತು ಬೆಂಡಾಗಿದ್ದ ಸಕಲ ಜೀವರಾಶಿಗಳಿಗೆ ಹೊಸ ಉತ್ಸಾಹದ ಸೋನೆ ಸುರಿಸಿದ್ದ. ಈ ಬೆನ್ನಲ್ಲೇ ಮತ್ತೆ ಮಳೆಯಾಗುವ ಮುನ್ಸೂಚನೆಯೊಂದು ದೊರೆತಿದ್ದು, ಸತತ ಎಂಟುದಿನಗಳ ಕಾಲ ವರುಣಾ