ಬಾವಿಯಲ್ಲಿ ಆಯತಪ್ಪಿ ಬಿದ್ದಿದ್ದ ವೃದ್ಧೆಯೊಬ್ಬರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಹೊರ ಭಾಗದ ತೋಟದಲ್ಲಿನ ಬಾವಿಯಲ್ಲಿ ಈ ಘಟನೆ ನಡೆದಿದೆ.85 ವರ್ಷದ ತಂಗೆವ್ವ ಗದ್ಯಾಳ ಬಾವಿಯಲ್ಲಿ ಬಿದ್ದಿದ್ದ ವೃದ್ಧೆ. ಬಾವಿಯಲ್ಲಿ ಬಿದ್ದ ಬಳಿಕ ಪೈಪ್ ಹಿಡಿದುಕೊಂಡು ನಿಂತಿದ್ದರು ವೃದ್ಧೆ ತಂಗೆವ್ವ. ಆ ಬಳಿಕ ಮನೆಯವರು ನೋಡಿ ಸ್ಥಳೀಯರ ಸಹಾಯದಿಂದ ವೃದ್ಧೆಯ ರಕ್ಷಣೆ ಮಾಡಿದ್ದಾರೆ.65 ಅಡಿ ಆಳದ ಬಾವಿಯಲ್ಲಿ 15 ಅಡಿ ನೀರು ತುಂಬಿತ್ತು.