ಫಸ್ಟನೈಟ್ ಹಾಲಲ್ಲಿ ವಿಷ ಬೆರೆಸಿ ಗಂಡನಿಗೆ ಕುಡಿಸಿದ ಪತ್ನಿ

ಕರ್ನೂಲ್| Jagadeesh| Last Modified ಸೋಮವಾರ, 18 ನವೆಂಬರ್ 2019 (14:52 IST)
ಪತಿಯನ್ನು ಮದುವೆಯಾದ ವಾರದಲ್ಲೇ ಕೊಲೆ ಮಾಡಲು ಪತ್ನಿಯೊಬ್ಬಳು ಮುಂದಾಗಿರೋ ಅಮಾನವೀಯ ಘಟನೆ ನಡೆದಿದೆ.

ನಾಗಮಣಿ ಮತ್ತು ಲಿಂಗಯ್ಯ ಎಂಬುವರು ಮದುವೆ ಅದ್ಧೂರಿಯಾಗಿ ನಡೆದಿತ್ತು. ಮದುವೆ ಬಳಿಕ ಮನೆ ದೇವರಿಗೆ ಎಲ್ಲರೂ ಸೇರಿ ಹೋಗಿ ಬಂದಿದ್ದರು.

ಇನ್ನೇನು ಮೊದಲ ರಾತ್ರಿ ನಡೆಯುತ್ತದೆ ಅಂತ ಗಂಡನೂ ಸಹಜವಾಗಿ ಖುಷ್ ಆಗಿದ್ದ. ಆದರೆ ಹಾಲಿನೊಂದಿಗೆ ಬಂದ ಮಡದಿ ನಾಗಮಣಿ ಅದರಲ್ಲಿ ವಿಷ ಹಾಕಿ ಕುಡಿಸಿದ್ದಳು.

ವಿಷಯುಕ್ತ ಹಾಲು ಕುಡಿದ ಲಿಂಗಯ್ಯ ಕುಸಿದು ಬಿದ್ದೊಡನೆ ಆತನ ಮನೆಮಂದಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ಆಂಧ್ರದ ಕರ್ನೂಲ್  ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :