ರಾಜ್ಯದ ಚೆಕ್ ಪೋಸ್ಟ್ ವೊಂದರಲ್ಲಿ ಮುಂಬೈನಿಂದ ಬಂದ ಮಹಿಳೆಯೊಬ್ಬಳನ್ನು ಸ್ಕ್ರೀನಿಂಗ್ ಮಾಡುವಾಗ ಆ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಯರಗೊಳ ಗ್ರಾಮದ ಸಮೀಪದ ಚೆಕ್ ಪೋಸ್ಟ್ ನಲ್ಲಿ ಸ್ಕ್ರೀನಿಂಗ್ ಮಾಡುವಾಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬಳು ಮೂರ್ಛೆ ತಪ್ಪಿ ಬಿದ್ದಳು.ಆಕೆಯನ್ನು ಯಾದಗಿರಿ ಕೋವಿಡ್ ಆಸ್ಪತ್ರೆಗೆ ಕರೆ ತರುವ ವೇಳೆ ಮೃತಪಟ್ಟಿದ್ದಾಳೆ. ಮಹಾರಾಷ್ಟ್ರ ರಾಜ್ಯದ ಮುಂಬೈನ ಭರತ ನಗರ ಪ್ರದೇಶದಿಂದ ಖಾಸಗಿ ಕಾರೊಂದರಲ್ಲಿ ಅವರು