ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಮರಣಪತ್ರ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಳ್ಳೆಗಾಲ ತಾಲ್ಲೂಕಿನ ಶಂಕರಾಪುರದ ಲಿಂಗರಾಜು ಅವರ ಪುತ್ರಿ ಸುನಂದ(25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದು, ಹೆಬ್ಬಾಳದಲ್ಲಿರುವ ಸ್ಪೈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿದುಬಂದಿದೆ. ಮಹದೇಶ್ವರ ಬಡಾವಣೆಯಲ್ಲಿರುವ ಪಿಜಿಯಲ್ಲಿ ವಾಸವಿದ್ದ ಯುವತಿ, ಬೆಳಗ್ಗೆ ಬಹಳ ಹೊತ್ತಾದರೂ ರಾತ್ರಿ ಮಲಗಿದ ಯುವತಿ ಎದ್ದಿರಲಿಲ್ಲ. ಇತರೆ ಯುವತಿಯರು ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದ ಗೊತ್ತಾಗಿದೆ.