ಬೆಂಗಳೂರು : ಮೋಡ ಕವಿದ ವಾತಾವರಣ ಇರೋದ್ರಿಂದ ಬೆಂಗಳೂರಿನಲ್ಲಿ ಹಸಿರು ಧೂಮಕೇತುವಿನ ಗೋಚರ ಸಾಧ್ಯವಾಗಿಲ್ಲ.ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಹಸಿರು ಧೂಮಕೇತು ಗೋಚರವಾಗಬೇಕಿತ್ತು. ಆದ್ರೆ ಬೆಂಗಳೂರಿನಲ್ಲಿ ದಟ್ಟವಾದ ಮೋಡ ಇರುವುದರಿಂದ ಹಸಿರು ಧೂಮಕೇತು ಕಣ್ತುಂಬಿಕೊಳ್ಳಲು ಆಗಲಿಲ್ಲ. ಸುಮಾರು 50 ಸಾವಿರ ವರ್ಷಗಳ ಹಿಂದೆ ಅಂದ್ರೆ ಶಿಲಾ ಯುಗದ ಸಂದರ್ಭದಲ್ಲಿ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ಹಸಿರು ಧೂಮಕೇತು ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬಂದಿದೆ. ಆಕಾಶದಲ್ಲಿ ಸಂಭವಿಸುವ ಕೌತುಕವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು