ಬೆಂಗಳೂರಿನಲ್ಲಿ ಮನೆಯ ಮೇಲಿಂದ ಬಿದ್ದು ವಿಧ್ಯಾರ್ಥಿ ಸಾವನಪ್ಪಿದ್ದಾನೆ. ಪವನ್ ಸಾವನ್ನಪ್ಪಿರೋ ವಿದ್ಯಾರ್ಥಿ. ಸುಬ್ರಮಣ್ಯ ನಗರದಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 4.30ರ ಸುಮಾರಿಗೆ ಮನೆಯ ಮೇಲಿಂದ ಬಿದ್ದು ವಿದ್ಯಾರ್ಥಿ ಸಾವನಪ್ಪಿದ್ದಾನೆ. ಸ್ಥಳಕ್ಕೆ ಸುಬ್ರಮಣ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪವನ್ ನಿನ್ನೆ ಸಂಜೆ ಕಾಲೇಜಿನಿಂದ ಹೆಗ್ಗನಹಳ್ಳಿ ಮನೆಗೆ ಬಂದಿದ್ದ. ಮನೆಯಲ್ಲಿ ಬ್ಯಾಗ್ ಇಟ್ಟು ಮಿಲ್ಕ್ ಕಾಲೋನಿ ಬಳಿ ತೆರಳಿದ್ದ.