ಬೆಂಗಳೂರು : ಪೋಷಕರು ಬೈದಿದಕ್ಕೆ ಯುವಕ ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದಕ್ಕೆ ಪೋಷಕರು ಮಗನಿಗೆ ಬೈದಿದ್ದಾರೆ. ಇದಕ್ಕೆ ಪತ್ರ ಬರೆದು ಮನೆ ಬಿಟ್ಟು ಹೋಗಿದ್ದಾನೆ. ನನ್ನ ಹುಡುಕಬೇಡಿ ಎಂದು ಪತ್ರದಲ್ಲಿ ಹೇಳಿದ್ದಾನೆ.ಬಿಲ್ಡರ್ ಮಂಜುನಾಥ್ ಎಂಬುವವರ ಪುತ್ರ ವಿಶಾಲ್ ಎಂಬಾತ ಮನೆ ಬಿಟ್ಟು ಹೋಗಿರುವ ಯುವಕ. ವಿಶಾಲ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದಿದ್ದ. ಆದರೆ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಹೀಗಾಗಿ ಮನೆಯವರು ಬೈದಿದ್ದಾರೆ