ಮರಾಠಿ ಭಾಷಿಕರಿಂದ ರಾಜ್ಯದ ಯುವಕನ ಮೇಲೆ ಹಿಗ್ಗಾಮುಗ್ಗಾ ಥಳಿತ

ಚಿಕ್ಕೋಡಿ, ಭಾನುವಾರ, 28 ಏಪ್ರಿಲ್ 2019 (15:48 IST)


ಟಾಟಾ ಸುಮೋ ಒಂದರಲ್ಲಿ ಬಂದಿದ್ದ ನಾಲ್ಕು ಜನ ವ್ಯಕ್ತಿಗಳು ಯುವಕನೊಬ್ಬನನ್ನು ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಲ ಗ್ರಾಮದ ಹತ್ತಿರ  ಮಹಾರಾಷ್ಟ್ರ ಮೂಲದ ಟಾಟಾ ಸುಮೋ ಒಂದರಲ್ಲಿ ಬಂದ ನಾಲ್ಕು ಜನ ವ್ಯಕ್ತಿಗಳು ಯುವಕನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಯುವಕನನ್ನು ಥಳಿಸುತ್ತಿದ್ದ ಘಟನೆ  ನಡೆದಿದೆ.

MH -22-D-2162 ಸುಮೋ  ವಾಹನದಲ್ಲಿ ಬಂದ ವ್ಯಕ್ತಿಗಳು ಮರಾಠಿ ಭಾಷಿಕರಾಗಿದ್ದು, ಯುವಕನ್ನು ಬೆನ್ನಟ್ಟಿ ಹಿಡಿದು "ದುಡ್ಡು ಕೊಡದೇ ತಪ್ಪಿಸಿಕೊಂಡು ಬಂದಿದೀಯಾ" ಎಂದು ಮರಾಠಿಯಲ್ಲಿ ಮಾತನಾಡುತ್ತಿದ್ದರು. "ಅಣ್ಣಾ ಹೇಳ್ರಿ ಅಣ್ಣಾ ಹೇಳ್ರಿ" ಎಂದು ಅಲ್ಲಿದ್ದವರಿಗೆ ಗೋಗರಿಯುತ್ತಿದರೆ  "ಒಂದು ಲಕ್ಷ ಇಪ್ಪತ್ತು ಸಾವಿರ ತಗೋಂಡ ಬಂದಾನ" ಎನ್ನುವ ಮಾತು ಕೇಳಿ ಬಂದವು.   

ಹಳ್ಯಾಲ ಗ್ರಾಮದ ಯುವಕ ಮಹಾರಾಷ್ಟ್ರದಲ್ಲಿ ಇಟ್ಟಿಗೆ ಬಟ್ಟಿಯಲ್ಲಿ  ಕೆಲಸ ಮಾಡುತ್ತಿದ್ದನು. ಒಂದು ಲಕ್ಷ ಇಪ್ಪತ್ತು ಸಾವಿರ  ಮುಂಗಡ ಪಡೆದು ಕೆಲಸ ಮಾಡದೆ ಎಸ್ಕೇಪ್ ಆಗಿ ಬಂದಿದ್ದನು ಎನ್ನಲಾಗಿದೆ.   ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ; ರಾಜ್ಯದಲ್ಲಿ ಹೈ ಅಲರ್ಟ್

ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ್ದ ಹಿನ್ನಲೆಯಲ್ಲಿ ರಾಜ್ಯದಲ್ಲಿಯೂ ಹೈ ಅಲರ್ಟ್ ಘೋಷಣೆ ...

news

ಗೃಹ ಸಚಿವ, ಡಿಕೆಶಿಗೆ ಶೆಟ್ಟರ್ ವಾರ್ನಿಂಗ್?

ರಾಜ್ಯದ ಸಚಿವ ಎಂ.ಬಿ.ಪಾಟೀಲ್, ಡಿ.ಕೆ. ಶಿವಕುಮಾರ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಾಕೀತು ಮಾಡಿದ್ದಾರೆ.

ಬಾಲಕಿ ರೇಪ್ ಕೇಸ್ ಗೆ ಟ್ವಿಸ್ಟ್: ಆರೋಪಿ ಸೆಲ್ಫಿ ಮಾಡಿ ಆತ್ಮಹತ್ಯೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು, ಆರೋಪಿ ಸೆಲ್ಫಿ ...

news

ತುಂಬೆ ವೆಂಟೆಡ್ ಡ್ಯಾಂಗೆ ಏನಾಗಿದೆ?

ತುಂಬೆ ವೆಂಟೆಡ್ ಡ್ಯಾಂ ನೋಡಲು, ಸಚಿವರು, ಶಾಸಕರು, ಅಧಿಕಾರಿಗಳು ದೌಡಾಯಿಸಿದ್ದಾರೆ.