ಮೂರು ಮಕ್ಕಳ ತಾಯಿಯೊಬ್ಬಳ ಜೊತೆ ಯುವಕನೊಬ್ಬ ಪ್ರೀತಿಸಿ ಓಡಿಹೋಗಿದ್ದಕ್ಕಾಗಿ ಯುವಕನ ತಾಯಿ, ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಬ್ಬಮ್ಮ ಹಾಗೂ ಆಕೆಯ ಮಗ ಸಿದ್ದರಾಜು ಸಾವಿಗೆ ಶರಣಾದವರು. ಚಾಮರಾಜನಗರದ ಗುಂಡ್ಲುಪೇಟೆಯ ಬೆಳಚವಾಡಿಯಲ್ಲಿ ಈ ಘಟನೆ ನಡೆದಿದೆ. ಸುಬ್ಬಮ್ಮಳ ಎರಡನೇ ಮಗ ನಂಜುಂಡಿ ಹಾಗೂ ಅದೇ ಗ್ರಾಮದ ಸ್ವಾಮಿಯ ಪತ್ನಿ ಮಂಜುಳಾ ನಡುವೆ ಅಕ್ರಮ ಸಂಬಂಧ ಇತ್ತು. ಇವರಿಬ್ಬರ ಕಳ್ಳ ಸಂಬಂಧವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಗಂಡ ಸ್ವಾಮಿಗೆ ಕೆಲವರು ತೋರಿಸಿದ್ದರು.