ಬೆಂಗಳೂರು : ವಿಮಾನ ನಿಲ್ದಾಣ ಸಿಬ್ಬಂದಿ ಬಳಿ ತಾನೊಬ್ಬ ಟೆರರಿಸ್ಟ್ ಎಂದು ಬೆದರಿಕೆ ಹಾಕಿರುವ ಘಟನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆರೋಪಿ ಆದರ್ಶ್ ಕುಮಾರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.ಟಿಕೆಟ್ ಇಲ್ಲದೇ ವಿಮಾನ ಪ್ರಯಾಣಕ್ಕೆ ಮುಂದಾದ ಯುವಕನೊಬ್ಬ ಫೆ. 17 ರಂದು ಬೆಂಗಳೂರು – ಲಖ್ನೋ ವಿಮಾನವಲ್ಲಿ ಪ್ರಯಾಣಿಸಲು ಆದರ್ಶ್ ಕುಮಾರ್ ಬಂದಿದ್ದ. ಆದರೆ ಈತ ವಿಮಾನ ಪ್ರಯಾಣಕ್ಕೆ ಟಿಕೆಟ್ ಪಡೆದಿರಲಿಲ್ಲ. ಸಿಐಎಸ್ಎಫ್ ತಪಾಸಣೆಯ ವೇಳೆ ತಾನೊಬ್ಬ ಟೆರರಿಸ್ಟ್ ಎಂದು ಬೆದರಿಕೆ ಹಾಕಿದ್ದ. ಕೂಡಲೇ ವಿಮಾನ ನಿಲ್ದಾಣದ ಸಿಬ್ಬಂದಿ ಪೊಲೀರಿಗೆ ಮಾಹಿತಿ ನೀಡಿದ್ದರು.