ಬೆಂಗಳೂರು : ಆಮ್ ಆದ್ಮಿ ಪಕ್ಷದಿಂದ ನಮಗೆ ತೊಂದರೆಯಾಗುತ್ತಿದೆ. ಆಪ್ ಪಕ್ಷದವರು ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು ಆಪ್ ಪಕ್ಷದಿಂದ ನಮಗೆ ತೊಂದರೆಯಾಗುತ್ತಿದೆ. ಬಿಜೆಪಿಗೆ ಅನುಕೂಲವಾಗುವಂತೆ ಅವರು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ನಾವು ಗೋವಾ ಸೇರಿದಂತೆ ಹಲವು ಕಡೆ ನೋಡಿದ್ದೇವೆ ಎಂದಿದ್ದಾರೆ. ಗುಜರಾತ್ನಲ್ಲಿ ಹೆಚ್ಚು ಸೀಟ್ಗಳ ನಿರೀಕ್ಷೆಯಿತ್ತು.