ಬೇಡಿ ಬಂದವರನ್ನು ಕರಪಿಡಿದು ಕಾಪಾಡುವ ಕರುಣಾಳು, ಕಲಿಯುಗದ ಕಲ್ಪತರು ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಭಕ್ತಿ ಹಾಗೂ ಚೈತನ್ಯದ ವಾತಾವರಣದಲ್ಲಿ ನಡೆಯುತ್ತಿದೆ.ದೇಶದ ಮೂಲೆ-ಮೂಲೆಗಳಿಂದ ಭಕ್ತಾದಿಗಳು 347ನೇ ಆರಾಧನಾ ಮಹೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಆ.27ರಂದು ರಥೋತ್ಸವ ಜರುಗಲಿದೆ.ಮಹೋತ್ಸವ ಅಂಗವಾಗಿ ಮೂಲ ರಾಮದೇವರ ಪೂಜೆಗೆ 60 ಕೆ.ಜಿ. ತೂಕದ ಚಿನ್ನದ ಮಂಟಪ ಮತ್ತು ಚಿನ್ನದಿಂದ ಮಾಡಿದ