ಮಂಗಳೂರು: ಕೊಟ್ಟಾರ ಚೌಕಿಯ ಬಳಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ ಬಷೀರ್ (47) ಕೊನೆಯುಸಿರೆಳೆದಿದ್ದಾರೆ. ಕಾಟಿಪಳ್ಳಿಯಲ್ಲಿ ದೀಪಕ್ ರಾವ್ ಕೊಲೆ ನಡೆದ ಡಿಸೆಂಬರ್ 3ರ ರಾತ್ರಿಯಂದೇ ಬಷೀರ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.