ಮಂಗಳೂರು : ಇತ್ತಿಚೆಗಷ್ಟೇ ಮೂಡಬಿದಿರೆಯ ಕರಿಂಜೆ ಮುಕ್ತಾನಂದ ಸ್ವಾಮೀಜಿ ಅವರು ಕಾರ್ಯಕ್ರಮವೊಂದರಲ್ಲಿ ರಾಕ್ಷಸ ಸಿಎಂ ಮತ್ತು ರಾಕ್ಷಸ ಎಂಎಲ್ಎ ಎಂಬ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರು ಸ್ವಾಮೀಜಿ ಅವರ ಕುರಿತು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರು,ಅವಾ ಯಾರೋ ಒಬ್ಬ ಕರಿಂಜೆ ಸ್ವಾಮೀಜಿ ಭಾಷಣದಲ್ಲಿ ಹೇಳಿದನಂತೆ. ಒಬ್ಬ ರಾಕ್ಷಸ ಮುಖ್ಯಮಂತ್ರಿ ಇದ್ದಾನೆ. ಒಬ್ಬ ರಾಕ್ಷಸ ಎಂಎಲ್ಎ ಇದ್ದಾನೆ