ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತುಮಕೂರು ,ಚಿಕ್ಕಬಳ್ಳಾಪುರ, ನೆಲಮಂಗಲ, ಹಾಗು ಬಳ್ಳಾರಿಯಲ್ಲಿ ಏಕಕಾಲಕ್ಕೆ ಎಸಿಬಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ತುಮಕೂರಿನ ಎಸಿಬಿ ಡಿ.ವೈ.ಎಸ್.ಪಿ. ಜಿ.ಎನ್. ಮೋಹನ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ತುಮಕೂರಿನ ಪಿ.ಡಬ್ಲೂ.ಡಿ. ಎಇಇ ಜಗದೀಶ್ ಮನೆ ಮೇಲೆ ದಾಳಿ ನಡೆದಿದೆ. ಕೊರಟಗೆರೆಯಲ್ಲಿರುವ ಹಾಗು ತುಮಕೂರಿನ ಸರಸ್ವತಿ ಪುರದಲ್ಲಿರುವ ಅವರ ಮನೆ ಮೇಲು ದಾಳಿ