ಬೆಂಗಳೂರಿನಲ್ಲಿ BDA ಮೇಲೆ ಎಸಿಬಿ ದಾಳಿ

bangalore| geetha| Last Modified ಸೋಮವಾರ, 22 ನವೆಂಬರ್ 2021 (20:46 IST)
ಬೆಂಗಳೂರು:
ಬೆಂಗಳೂರಿನಲ್ಲಿ ಮೇಲೆ ಎಸಿಬಿ ದಾಳಿ ನಡೆಸಿದ ಬಳಿಕ ಬಿಡಿಎ ವಿರುದ್ದ ಸಾಲು ಸಾಲು ದೂರುಗಳು ಕೇಳಿ ಬರುತ್ತಿದ್ದು,
ಬಿಡಿಎನಿಂದ ವಂಚಿತರಾಗಿರುವ
ಉದ್ಯಮಿಗಳು, ಸಾರ್ವಜನಿಕರು ದಾಖಲೆಗಳ ಸಹಿತ ದೂರು ನೀಡುತ್ತಿದ್ದಾರೆ. ಇದುವರೆಗೆ ಎಸಿಬಿಗೆ ಹೊಸದಾಗಿ ಮೂವತ್ತಕ್ಕೂ ಹೆಚ್ಚು ದೂರು ಬಂದಿದ್ದು,
ಪ್ರತಿಯೊಂದು ದೂರನ್ನು ಪರಿಶೀಲನೆ ನಡೆಸಲು ಎಸಿಬಿ ತೀರ್ಮಾನ ಮಾಡಿದೆ. ದೂರುಗಳನ್ನು
ಪರಿಶೀಲನೆ ನಡೆಸಿ ಸಾಕ್ಷಿ ಕಲೆ ಹಾಕಿ ಕೇಸ್ ದಾಖಲು ಮಾಡಲು ಎಸಿಬಿ ನಿರ್ಧರಿಸಿದೆ. ಎಸಿಬಿ ಬಳಿಯೇ ಬಿಡಿಎ DS ಗಳ ಕಚೇರಿಯ ಬೀಗದ ಕೀಗಳಿದ್ದು, ನವೆಂಬರ್ 25 ರ ವರೆಗೆ ಎಸಿಬಿ ಸರ್ಚ್ ವಾರೆಂಟ್ ಹೊಂದಿದೆ. ನಾಳೆ ಬೆಳಗ್ಗೆಯಿಂದ ಮತ್ತೆ ಎಸಿಬಿ ದಾಳಿ ಮುಂದುವರೆಯಲಿದೆ. ಎಸಿಬಿ ತನಿಖೆ ವೇಳೆ ಬ್ರೋಕರ್ ಗಳ ಮೂಲಕ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಹಿಂದೆ 2000ನೇ ಇಸವಿ ಹಾಗೂ ಅದಕ್ಕಿಂತ ಹಿಂದೆ ಮಾರಿದ್ದ ಸೈಟ್ ಗಳನ್ನೆ ಮತ್ತೆ ಮತ್ತೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :