ಕೋರ್ಟ್ ಆವರಣದಲ್ಲೇ ಭ್ರಷ್ಟಾಚಾರ ಬಯಲಿಗೆ ಎಳೆದ ಎಸಿಬಿ

ತುಮಕೂರು, ಮಂಗಳವಾರ, 30 ಏಪ್ರಿಲ್ 2019 (18:34 IST)

ನ್ಯಾಯಾಲಯ ಆವರಣದಲ್ಲಿಯೇ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದೆ ಎಸಿಬಿ.
 

ಎಸಿಬಿ ಅಧಿಕಾರಿಗಳಿಗೆ ಬಲೆಗೆ ಸಿಕ್ಕಿಬಿದಿದ್ದಾರೆ ಪಬ್ಲಿಕ್ ಪ್ರಾಸಿಕ್ಯೂಟರ್. ಕಕ್ಷಿದಾರಿಂದ 20 ಸಾವಿರ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಪಿಪಿ. ತುಮಕೂರು ಜಿಲ್ಲೆ ತಿಪಟೂರು ನ್ಯಾಯಾಲಯ ಆವರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಿಪಟೂರು ಮುನಿಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ. ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ.
ಕೆ ಇ‌ ಬಿ‌ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ ನಡೆದಿದೆ.

ಪ್ರಕರಣ ಸಂಬಂಧಿಸಿದಂತೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 20 ಸಾವಿರ ಅಕೌಂಟ್ ಮೂಲಕ ಪಡೆದಿದ್ದರು.
20 ಸಾವಿರ ಹಣ ನೇರವಾಗಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಪಿಪಿ ಕಚೇರಿಯಲ್ಲೇ ರಾತ್ರಿ 10.30 ರವೆರೆಗೆ ವಿಚಾರಣೆ ನಡೆಸಿದ್ದಾರೆ ಎಸಿಬಿ ಅಧಿಕಾರಿಗಳು. 2015 ರಲ್ಲಿ ವಿದ್ಯುತ್ ಕಂಬ ವೃದ್ಧೆ ಮೇಲೆ ಬಿದ್ದು ಕಾಲು ತುಂಡಾಗಿತ್ತು. ಈ ಪ್ರಕರಣದ ವಕಾಲತ್ತು ವಹಿಸಿದ್ದರು ಪಬ್ಲಿಕ್ ಪ್ರಾಸಿಕ್ಯೂಟರ್. ನೆನ್ನೆ ನ್ಯಾಯಾಲಯದಲ್ಲಿ ಕೇಸ್ ಖುಲಾಸೆಗೊಂಡಿತ್ತು. ಆದರೆ ಎಪಿಪಿ, ಮೇಲ್ಮನವಿ ಸಲ್ಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್: ಜೈಲಲ್ಲಿ ಫೈಟಿಂಗ್ ಜೋರು

ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್ ಶುರುವಾಗಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ದೊರೆತಿದ್ದು, ಜೈಲಿನಲ್ಲಿ ...

news

ಮಾರಿ ಹಬ್ಬದಲ್ಲಿನ ಕುಣಿತ ನೋಡಿದಿರಾ?

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಸಂಪರ್ಕದ ಕೊಂಡಿಯಂತಿರುವ ಗಡಿ ಜಿಲ್ಲೆಯಲ್ಲಿ ಮಾರಿ ಹಬ್ಬದ ಸಂಭ್ರಮ ಮನೆ ...

news

ಕೇರಳ ಜನರು ಮಾಡ್ತಿದ್ದಾರೆ ಇಂಥ ಅಸಹ್ಯ ಕೆಲಸ

ಕೇರಳದ ಜನರು ರಾಜ್ಯದ ಜನರೊಂದಿಗೆ ಅಸಹ್ಯ ಕೆಲಸ ಮಾಡುತ್ತಿದ್ದಾರೆ. ಬೇಡ ಎಂದರೂ ಮತ್ತೆ ತಮ್ಮ ಕೆಲಸ ...

news

ಮಹಡಿ ಮೇಲೆ ಮಲಗಿದ್ರೆ ಹುಷಾರ್; ರಾತ್ರಿ ಆಗಬಾರದ್ದು ಆಗುತ್ತೆ!

ಬೇಸಿಗೆಯ ವಿಪರೀತ ಸೆಖೆಗೆ, ತಾಪಕ್ಕೆ ಹೆದರುವ ಜನರು ತಮ್ಮ ಮನೆಗಳ ಮಹಡಿ ಮೇಲೆ ಮಲಗಿಕೊಳ್ಳುತ್ತಿದ್ದಾರೆ. ...