ಆಗುಂಬೆ ಘಾಟ್ ನ 6 ಮತ್ತು 7 ನೇ ತಿರುವಿನ ಮಧ್ಯದಲ್ಲಿ ಪ್ರಪಾತದತ್ತ ಮುಖ ಮಾಡಿದ ಟ್ರಕ್ ರಸ್ತೆ ಬದಿಯಲ್ಲಿ ಅಡ್ಡಲಾಗಿ ನಿರ್ಮಿಸಲಾಗಿರುವ ಉಕ್ಕಿನ ತಡೆಗೋಡೆ ಮೇಲೆ ಹತ್ತಿ ನಿಂತಿದೆ. ಶಿವಮೊಗ್ಗ ಕಡೆಯಿಂದ ಭತ್ತವನ್ನು ತುಂಬಿಕೊಂಡು ಮಂಗಳೂರಿನತ್ತ ತೆರಳುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದ್ದರಿಂದ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳು. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಟ್ರಕ್ ಪ್ರಪಾತಕ್ಕೆ ಬೀಳುವುದು ತಪ್ಪಿದೆ.