ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾಗಿರುವ ಪತ್ರಕರ್ತೆಯರ ಅಹವಾಲುಗಳನ್ನು ಡಿಸಿಎಂ ಆಲಿಸಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅಹವಾಲು ಸ್ವೀಕರಿಸಿ, ಮಾನಸಿಕ ಸ್ಥೈರ್ಯ ತುಂಬಿದರು. ಲಾಕ್ ಡೌನ್ ಹಿನ್ನೆಲೆಯಿಂದ ಪತ್ರಕರ್ತೆಯರು ಬಾಧಿತರಾಗಿದ್ದು, ಅವರಿಗೆ ಸರ್ಕಾರ ನೆರವಾಗಬೇಕು. ಅನಿವಾರ್ಯವಾಗಿ ಇತರೆ ವೃತ್ತಿಪರರಂತೆ ಪತ್ರಕರ್ತೆಯರು ಮನೆಯಿಂದಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪೂರಕ ಪರಿಕರಗಳನ್ನು ಒದಗಿಸಬೇಕು. ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಕಾರ್ಯಾಗಾರ, ಶಿಬಿರ, ಕ್ಷೇತ್ರ ಪ್ರಾತ್ಯಾಕ್ಷಿಕೆಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘವು