ಬಾಗಲಕೋಟೆಯಲ್ಲಿ ಹೈಸ್ಕೂಲ್ಗೆ ಹಿಜಾಬ್ ಧರಿಸಿಕೊಂಡು ಕೆಲ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಶಾಲೆ ಒಳಗಡೆ ಬಂದು ಹಿಜಾಬ್ ತೆಗೆದು ತರಗತಿ ಕೊಠಡಿಗೆ ಪ್ರವೇಶ ಮಾಡುತ್ತಿದ್ದಾರೆ. ಹಿಜಾಬ್ ಧರಿಸಿ ಬಂದ ಅನ್ಫಿಯಾ ಎಂಬ ವಿದ್ಯಾರ್ಥಿನಿ ಮಾತನಾಡಿ, ನಾವು ಮನೆಯಿಂದ ಹಿಜಾಬ್ ಧರಿಸಿಕೊಂಡು ಬರುತ್ತೇವೆ.ಕ್ಲಾಸ್ ರೂಮಿಗೆ ಹೋಗುವಾಗ ಹಿಜಾಬ್ ತೆಗೆಯುತ್ತೇವೆ. ಮನೆಯಿಂದ ಹಾಕಿಕೊಂಡು ಬರುತ್ತೇವೆ. ಕ್ಲಾಸ್ ರೂಮಲ್ಲಿ ಧರಿಸೋದಿಲ್ಲ. ಮನೆಯಲ್ಲಿ ಹಾಗೂ ಶಿಕ್ಷಕರು ಕ್ಲಾಸ್ ರೂಮಲ್ಲಿ ಹಾಕಬೇಡ ಅಂದಿದ್ದಾರೆ. ನಾವು ಮೊದಲಿಂದಲೂ ಧರಿಸುತ್ತಾ ಬಂದಿದ್ದೇವೆ.