Widgets Magazine

ಬ್ರಿಜಾ ಕಾರು ಟವೇರಾ ನಡುವೆ ಅಪಘಾತ; 12 ಮಂದಿ ಸ್ಥಳದಲ್ಲೆ ಸಾವು

ತುಮಕೂರು| pavithra| Last Modified ಶುಕ್ರವಾರ, 6 ಮಾರ್ಚ್ 2020 (10:25 IST)
ತುಮಕೂರು : ಬ್ರಿಜಾ ಕಾರು ಟವೇರಾಗೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನಪ್ಪಿದ ಘಟನೆ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ನಡೆದಿದೆ.


ಬೆಂಗಳೂರಿನ ಮೂವರು ಯುವಕರಿದ್ದ ಬ್ರಿಜಾ ಕಾರು ತಪ್ಪಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿ ಎದುರುಗೆ ಬರುತ್ತಿದ್ದ ಟವೇರಾಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬ್ರಿಜಾ ಕಾರಿನಲ್ಲಿದ್ದ ಮೂವರು ಯುವಕರು ಹಾಗೂ ಟವೇರಾದಲ್ಲಿದ್ದ 9 ಮಂದಿ ಸಾವನಪ್ಪಿದ್ದಾರೆ.


ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು  ಬೆಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ. ಅಮೃತೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :