ಆತ ಎಂದಿನಂತೆ ಇಟ್ಟಿಗೆಗಳನ್ನು ತುಂಬಿಕೊಂಡು ವಾಹನ ಚಲಾಯಿಸುತ್ತಿದ್ದ. ಆದರೆ ಆತನ ಬಾಳಲ್ಲಿ ವಿಧಿ ಆಟವೇ ಬೇರೆಯಾಗಿತ್ತು. ಚಲಿಸುತ್ತಿದ್ದ ವಾಹನದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ್ದಾನೆ.ಟ್ರಾಕ್ಟರ್ ಇಂಜಿನ್ ಮುಗುಚಿ ಚಾಲಕ ಸಾವನ್ನಪ್ಪಿದ್ದಾನೆ. ಮಧುಗಿರಿ ಪಟ್ಟಣದ ಸಮೀಪ ಇರುವ ವಾಲ್ಮೀಕಿ ಬಡಾವಣೆಯಲ್ಲಿ ಅಪಘಾತ ಸಂಭವಿಸಿದೆ. ಇಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ಇಂಜಿನ್ ಮುಗುಚಿ ಈ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪುರವರ ಗ್ರಾಮದ ನಿವಾಸಿ ಟ್ಯಾಕ್ಟರ್ ಚಾಲಕ ರಂಗನಾಥ್ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇಂಜಿನ್ ಹಾಗೂ