ಧಾರವಾಡ: ಕಾನೂನುಬಾಹಿರ ಚಟುವಟಿಕೆ ಹಾಗೂ ಶಾಂತಿಭಂಗ ಮಾಡುತ್ತಿದ್ದ ಇಬ್ಬರ ಮೇಲೆ ಹುಬ್ಬಳ್ಳಿ-ಧಾರವಾಡ ಆಯುಕ್ತ ಎಂ.ಎನ್.ನಾಗರಾಜ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಓರ್ವನ ಗಡಿಪಾರಿಗೆ ಆದೇಶಿಸಿದ್ದು, ಮತ್ತೊಬ್ಬನಿಗೆ ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಧಾರವಾಡದ ಶಾಂತಿನಿಕೇತನ ನಿವಾಸಿ ಮೋಹನ್ ಅಲಿಯಾಸ್ ಚೀಟರ್ ಮೋನ್ಯಾ(60) ಗಡಿಪಾರು ಮಾಡಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ನಾಗರಾಜ್ ಆದೇಶಿಸಿದ್ದಾರೆ. ಈತನ ಮೇಲೆ 24 ಪ್ರಕರಣಗಳು ದಾಖಲಾಗಿವೆ. ಈತನಿಗೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವ ಸಲುವಾಗಿ ಗಡಿಪಾರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್