ಅನ್ಯ ಧರ್ಮದ ಹುಡುಗನ ಜೊತೆ ಹೋಗುತ್ತಿದ್ದಕ್ಕೆ ಮುಸ್ಲಿಂ ಯುವತಿಗೆ ಕೆಟ್ಟದಾಗಿ ನಿಂದಿಸಿದ್ದ ಮುಸ್ಲಿಂ ಯುವಕನನ್ನು ಬೆಂಗಳೂರು ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಜಾಕೀರ್ ಅಹಮ್ಮದ್ ಬಂಧಿತ ಆರೋಪಿ. ಮುಸ್ಲಿಂ ಯುವತಿ, ಬೈಕ್ನಲ್ಲಿದ್ದ ಯುವಕ ಇಬ್ಬರು ಪರಿಚಿತರು. ಇಬ್ಬರೂ ಕಂಪನಿಯೊಂದಕ್ಕೆ ಸಂದರ್ಶನ ನೀಡಲು ಹೋಗಿದ್ದರು. ಸಂದರ್ಶನ ಮುಗಿದ ಬಳಿಕ ಯುವತಿಯನ್ನು ಮನೆಗೆ ಡ್ರಾಪ್ ಮಾಡಲು ಯುವಕ ಹೋಗುತ್ತಿದ್ದ. ಮುಸ್ಲಿಂ ಯುವತಿ ಅನ್ಯಧರ್ಮಿಯ ಯುವಕನ