ಕಾಡಾನೆ ಕೊಂದು ದಂತ ತೆಗೆದು ಮಾರಾಟ ಮಾಡೋ ವೇಳೆ ಆರೋಪಿಗಳು ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನೆ ಹೂತಿದ್ದ ಸ್ಥಳದಲ್ಲಿ ಆನೆ ಮೃತದೇಹ ತೆಗೆದು ಮರಣೋತ್ತರ (Postmortem) ಪರೀಕ್ಷೆ ಮಾಡಲಾಗಿದೆ. ಅರಣ್ಯ ತನಿಖಾ ದಳದ ಡಿಸಿಎಫ್ ರವೀಂದ್ರ ನೇತೃತ್ವದಲ್ಲಿ ಸ್ಥಳ ಮಹಜರ್ ಮಾಡಲಾಗಿದ್ದು, ನೆನ್ನೆ ಆನೆ ದಂತ ಮಾರಾಟಮಾಡಲು ಮುಂದಾಗಿದ್ದ ವೇಳೆ ಮೂರು ಆರೋಪಿಗಳ ಬಂಧನ ಮಾಡಲಾಗಿದೆ. ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳ ಬಂಧನ