ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯಮಿ ದಿ. ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ನಿನ್ನೆ ರಾತ್ರಿ ಸಿಸಿಬಿ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ. ಸೆ. 27ರಂದು ಅಪಘಾತವೆಸಗಿದ ಬಳಿಕ ಮಲ್ಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ವಿಷ್ಣು, ಸೆ. 29ರಂದು ಬೆಳಗ್ಗೆ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆ ಸಿಬ್ಬಂದಿ ಹಾಗೂ ತನ್ನ ಸಹೋದರಿ ಚೈತನ್ಯ ಸಹಾಯದಿಂದ ನಾಪತ್ತೆಯಾಗಿದ್ದ.ನಾನು ಗಾಂಜಾ ಸೇವಿಸಿರಲಿಲ್ಲ. ನನ್ನ ತಂದೆ ಹೋಟೆಲ್ ನಲ್ಲಿ ನಾನೇ