ಬೆಂಗಳೂರಿನ ವಸಂತಪುರ ವಾರ್ಡ್ನ ಬಿಕಾಸಿಪುರ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬಡಾವಣೆಗೆ ರೆಬೆಲ್ ಸ್ಟಾರ್ ಅಂಬರೀಶ್ ಬಡಾವಣೆ ಎಂದು ಬಿಬಿಎಂಪಿ ಸರ್ವಾನುಮತದಿಂದ ನಾಮಕರಣ ಮಾಡಿದೆ.ಬಿಕಾಸಿಪುರ ಗ್ರಾಮದಲ್ಲಿನ ಬಿಡಿಎ ಬಡಾವಣೆಗೆ ಯಾವುದೇ ಹೆಸರು ಇಲ್ಲದಿರುವುದರಿಂದ ರೆಬೆಲ್ ಸ್ಟಾರ್ ಅಂಬರೀಶ್ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯೆ ಶೋಭಾಗೌಡ ತಿಳಿಸಿದ್ದಾರೆ.ರೆಬೆಲ್ ಸ್ಟಾರ್ ಅಂಬರೀಶ್ ಅವರ ಗೌರವಾರ್ಥ ಅವರ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ