ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣಕ್ಕೆ ಜೈಲುವಾಸ ಅನುಭವಿಸಿ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ,ಸಾಮಾಜಿಕ ಹೋರಾಟಗಾರ ಚೇತನ್, ತಮ್ಮ ನಿಲುವಿನ ಕುರಿತು ಮತ್ತೆ ಸ್ಪಷ್ಟಪಡಿಸಿದ್ದಾರೆ.ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ತಪ್ಪು ಕಂಡಲ್ಲಿ ಮಾತನಾಡುತ್ತೇನೆ. ಮತ್ತಷ್ಟು ಜನರಿಗೆ ತಲುಪಲು ಆ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವೆ. ಯಾವುದೇ ಕಾರಣಕ್ಕೂ ಟ್ವಿಟ್ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.ಸೋಮವಾರ ಸಂಜೆ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ನಟ ಚೇತನ್ ಅವರನ್ನು