ಸಿದ್ದಗಂಗಾ ಶ್ರೀಗಳಿಗೆ ಯಾರು ಭಾರತರತ್ನ ಕೊಡಬೇಕಿಲ್ಲ. ಭಾರತ ದೇಶಕ್ಕೆ ಅವರೆ ರತ್ನ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಸಿದ್ದಗಂಗಾ ಶ್ರೀಗಳಂತಹ ಮಹನೀಯರನ್ನ ಪಡೆದ ನಾವೇ ಧನ್ಯ. ಅವರನ್ನ ಅವಮಾನಿಸೋದು ಒಂದೆ ಶಿವನನ್ನ ಅವಮಾನೀಸೋದು ಒಂದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿದ್ದಗಂಗಾ ಶ್ರೀಗಳು ಲಿಂಗಾಯತ ಧರ್ಮಕ್ಕೆ ಸಮ್ಮತಿ ಸೂಚಿಸಿದ್ದರು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದರು.