ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ಹಣದ ಹಂಗಿಲ್ಲದೆ ಪ್ರಜಾಕೀಯ ಮಾಡಲು ಹೊರಟಿರುವ ಉಪೇಂದ್ರ ಪ್ರಾಮಾಣಿಕ ಪ್ರಯತ್ನಕ್ಕೆ ಪೋಷಕರು ಶುಭ ಕೋರಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ ತಂದೆ ಮಂಜುನಾಥ್, ರಾಜಕೀಯ ಪ್ರವೇಶದ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಇದ್ದಕ್ಕಿದ್ದಂತೆ ರಾಜಕೀಯ ಸೇರುತ್ತಿದ್ದಾನೆ. ಅವನು ನಂಬಿರುವ ವಿನಾಯಕ ಒಳ್ಳೆಯದು ಮಾಡುತ್ತಾನೆ ಎಂದಿದ್ದಾರೆ. ಅವರ ತಾಯಿ ಅನುಸೂಯಮ್ಮ ಸಹ ಮಗನಿಗೆ ಶುಭ ಕೋರಿದ್ದಾರೆ. ಚಿಕ್ಕಂದಿನಿಂದಲೂ ರಾಜಕೀಯಕ್ಕೆ ಸೇರಬೇಕೆಂದು ಅವನಿಗೆ