ರಾಜ್ಯ ಬಜೆಟ್ ಬಗ್ಗೆ ನಟ ಉಪೇಂದ್ರ ಟ್ವೀಟ್ ಮಾಡಿದ್ದೇನು ಗೊತ್ತಾ…?

ಬೆಂಗಳೂರು| pavithra| Last Modified ಶನಿವಾರ, 7 ಜುಲೈ 2018 (14:28 IST)
ಬೆಂಗಳೂರು : ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಈ ಬಗ್ಗೆ ನಟ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.


ರಾಜ್ಯ ಬಜೆಟ್ ಮಂಡನೆಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿರುವ ನಟ ಉಪೇಂದ್ರ ಅವರು, ‘ ಸಾಲ ಮನ್ನಾ ಮಾಡಿರುವುದು ಪ್ರಜೆಗಳು ಪ್ರಭುತ್ವ ಅಲ್ಲ ಎಂದು ಬಜೆಟ್ ನಲ್ಲಿ ವಿದ್ಯುತ್, ಪೆಟ್ರೋಲ್, ಡೀಸಲ್ ಮತ್ತು ಮದ್ಯಕ್ಕೆ ತೆರಿಗೆ ಏರಿಸುವುದರ ಮೂಲಕ ಪ್ರತ್ಯಕ್ಷವಾಗಿ ತೋರಿಸಿದ ನಮ್ಮ ಕುಮಾರಣ್ಣನವರಿಗೆ ಅಭಿನಂದನೆಗಳು’ ಎಂದು
ಹೇಳಿದ್ದಾರೆ.


ಇದೇ ವೇಳೆ ಮತ್ತೊಂದು ಟ್ವೀಟ್ ಮಾಡಿರುವ ಅವರು ‘ಶೇಕಡಾ ಇಪ್ಪತ್ತು ಜನ ಬುದ್ದಿವಂತ ಮೂರ್ಖರು ಕೂಗಾಡುತ್ತಿದ್ದರೆ, ಆಳುತ್ತಿದ್ದರೆ, ಎಂಬತ್ತು ಜನ ದಡ್ಡ ಬುದ್ದಿವಂತರು ಆಳಿಸಿಕೊಳ್ಳುತ್ತಿದ್ದಾರೆ, ಸುಮ್ಮನಿದ್ದಾರೆ. ಇದೇ ನಮ್ಮ ಈಗಿನ ರಾಜ ಪ್ರಭುತ್ವ. ಬುದ್ದಿವಂತ ಪ್ರಜೆಗಳ ಪ್ರಜಾಕೀಯ ಪ್ರಜಾಪ್ರಭುತ್ವ ಉದಯಿಸುತ್ತಿದೆ ವಿಶ್ವಾಸವಿರಲಿ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :