ಬೆಂಗಳೂರು: ಸ್ಯಾಂಡಲ್ ವುಡ್ ನಟಿಯೊಬ್ಬರ ಸಹೋದರ ಕೀರ್ತಿ ಚಂದ್ರ ಎಂಬವರು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಶಾದಿ. ಕಾಂ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ತಾನು ಖ್ಯಾತ ನಟಿಯ ಸಹೋದರ, ಉತ್ತಮ ಕೆಲಸದಲ್ಲಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದ. ಬಳಿಕ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಚ್ಯಾಟಿಂಗ್ ಮಾಡುತ್ತಿದ್ದರು. ಆತನ ಹುಟ್ಟುಹಬ್ಬಕ್ಕೆ ಲ್ಯಾಪ್ ಟಾಪ್, ದುಬಾರಿ ವಾಚ್, ಐಫೋನ್ ಇತ್ಯಾದಿ ದುಬಾರಿ ಉಡುಗೊರೆಗಳನ್ನು