ಅಂತಿಮ ದರ್ಶನಕ್ಕಾಗಿ ನಟಿ ಜಯಂತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲು ಸಿದ್ಧತೆ ನಡೆಸಲಾಗಿದೆ. ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ನಟಿ ತಾರಾ ಅನುರಾಧ ಹೇಳಿದ್ದಾರೆ. ಅಭಿನಯ ಶಾರದೆ, ಕನ್ನಡ ಚಿತ್ರರಂಗದ ಮೇರು ನಟಿ ಜಯಂತಿ ಇಂದು ಮುಂಜಾನೆ ಬನಶಂಕರಿಯ ಸ್ವಗೃಹದಲ್ಲಿ ಕೊನೆಯುಸಿರೆಳಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ಅಭಿಪ್ರಾಯಪಟ್ಟಿದ್ದಾರೆ. ಜಯಂತಿ ಅವರಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಆರೋಗ್ಯ